Tuesday, September 05, 2006

ಮರೆಯಲಾರದ ಶಾಲಾ ಪಾಠಗಳು

ಒಳ್ಳೆಯ ಅಧ್ಯಾಪಕರು ಮತ್ತು ಅವರ ಪಾಠಗಳು ವಿದ್ಯಾರ್ಥಿಗಳ ಮನಸಿನ ಮೇಲೆ ಹೇಗೆ ಮರೆಯಲಾಗದ ಪ್ರಭಾವ ಬೀರುತ್ತವೋ, ಹಾಗೆಯೇ ಕೆಲವು ಅಸಮರ್ಥ ಉಪಾಧ್ಯಾಯರು ಮತ್ತು ಅವರ ತಪ್ಪು ತಪ್ಪಾದ ಪಾಠಗಳನ್ನೂ ಮರೆಯಲಸಾಧ್ಯವೇ....

ಹೈಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ಕನ್ನಡ ಮೇಷ್ಟ್ರು ಎರಡನೇ ವರ್ಗಕ್ಕೆ ಸೇರಿದವರು....

ಅವರ ಪಾಠಗಳ ಕೆಲವು ತುಣುಕುಗಳು ಇಲ್ಲಿವೆ:

  • ಬಸವಣ್ಣನವರು ಹೋರಾಡಿದ್ದು "ವರ್ಣ ವ್ಯವಸ್ಥೆ"ಯ ವಿರುದ್ಧ. "ವರ್ಣ ವ್ಯವಸ್ಥೆ" ಎಂದರೆ ಬಿಳಿಯರು (ಬ್ರಿಟಿಷರು) ಭಾರತೀಯರ ಬಗ್ಗೆ ತೋರುತ್ತಿದ್ದ ತಾರತಮ್ಯ!!!
  • ಆಸ್ಪತ್ರೆಗೆ ಹೋಗುವುದು ಚಿಕಿತ್ಸೆ ಪಡೆಯಲು ಅಲ್ಲ - "ಚಿಕಿಸ್ತೆ"ಗಾಗಿ!!!
  • ದ್ರೌಪದಿಗೆ ಪಾಂಚಾಲಿ ಎಂಬ ಹೆಸರು ಬಂದದ್ದು ಆಕೆ ಪಾಂಚಾಲ ದೇಶದ ರಾಜಕುಮಾರಿ ಎಂದಲ್ಲ - ಆಕೆಗೆ ಐದು ಜನ ಪತಿಯರಿದ್ದುದರಿಂದ!!!
  • ಪಾಂಡವರಲ್ಲಿ ಮೊದಲನೆಯವನು ಧರ್ಮರಾಯ. ಯುದಿಷ್ಠಿರ ಶ್ರೀರಾಮನ ತಂದೆ, ದಶರಥ ಯಾರೆಂದು ತಿಳಿಯದು.
  • ಗಂಗೂಬಾಯಿ ಹಾನಗಲ್ ಅವರು ಸಂಗೀತ ವಿದುಷಿ. ವಿದುಷಿ ಎಂಬ ಪದದ ಅರ್ಥ "ವಿದೂಷಕ" ಎಂದು!!!

ಹಾಗೆಯೇ ೩ನೇ ತರಗತಿಯಲ್ಲಿ ಹಂಪಿಯ ಬಗ್ಗೆ ಹೇಳುತ್ತಿದ್ದ ಇಂಗ್ಲಿಷ್ ಮೇಡಂ, ಪಠ್ಯ ಪುಸ್ತಕದಲ್ಲಿ ಕಡಲೇ ಕಾಳು ಗಣಪತಿ ಎಂದಿದ್ದುದನ್ನು Spelling mistake ಎಂದು ತಿದ್ದಿಸಿ "ಕಡಲ ಕಲ್ಲು ಗಣಪತಿ" ಎಂದು ಬರೆಸಿದ್ದುದು ಇನ್ನೂ ಮರೆತಿಲ್ಲ!!

ಹೀಗಿರುತ್ತಾರೆ ನಮ್ಮ ಇಂದಿನ ಕೆಲವು ಅಧ್ಯಾಪಕರು....... ನಗುವೂ ಬರುತ್ತದೆ, ವಿಶಾದವೂ ಆಗುತ್ತದೆ.......

6 comments:

  1. hmm.. otherside of teachers on a teachers day!!!

    ella Reservation-yugada mahime anta andkoteeni..

    ReplyDelete
  2. Yeah! But that was actually co-incidental.

    Well, you guessed it right - ivella reservation mahime...

    ReplyDelete
  3. ಬಹಳ ತಮಾಷೆಯಾಗಿದೆ. ದೀಪಕ ಅವರು ಹೇಳಿದಂತೆ ಇವೆಲ್ಲಾ ಮೀಸಲಾತಿಯ ಮಹಿಮೆಯೇ. ಅದರಲ್ಲಿ ಸಂಶಯವೇ ಇಲ್ಲ. ಹೀಗೇ ಆದರೆ ಇನ್ನು ೨೦ ವರ್ಷಗಳಲ್ಲಿ ನಮ್ಮ ದೇಶ ಯಾವ ಗತಿಯಾಗುವುದು ಯೋಚಿಸಿ. ಪ್ರೈವೇಟ್ ಸೆಕ್ಟಾರಿನಲ್ಲಿಯೂ ಮೀಸಲಾತಿ ತರಲು ಹವಣಿಸುತ್ತಿದ್ದಾರೆ. ಹಾಗೆ ಮಾಡಿದರೆ, ಹಿಂದುಳಿದ ರಾಷ್ಟ್ರಗಳ ಪಟ್ಟಿಯಲ್ಲಿ ನಾವೇ ಮೊದಲಿಗರಾಗಬಹುದೇನೋ? ನನ್ನದೊಂದು ಹಳೆಯ ನೆನಪು.

    ಒಬ್ಬರು ಸಂಸ್ಕೃತ ಮಾಸ್ತರರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು (ಶಂಕರಮಠದಲ್ಲಿ). ಅದು ಮೊದಲನೆಯ ದರ್ಜೆಯ ತರಗತಿ. ಮಕ್ಕಳಿಗೆ ಸಂಸ್ಕೃತದ ಗಂಧವೇ ಇರಲಿಲ್ಲ. ಮಾಸ್ತರರೂ ಅಷ್ಟಕ್ಕಷ್ಟೇ.

    ಒಬ್ಬ ಹುಡುಗ, 'ಸಾರ್ ಕೃಷ್ಣಂ ವಂದೇ ಜಗದ್ಗುರುಂ, ಎಂಬ ವಾಕ್ಯಕ್ಕೆ ಅರ್ಥ ಏನ್ಸಾರ್' ಎಂದು ಕೇಳಿದ. ಅದಕ್ಕೇ ಬುರುಡೆ ಮಾಸ್ತರರು, ಗಟ್ಟಿಯಾಗಿ ಕೃಷ್ಣನೊಬ್ಬನೇ ಜಗದ್ಗುರು ಎಂದು ಹೇಳಿದರು. ಪಕ್ಕದಲ್ಲಿಯೇ ವೇದ ಪಾಠಕ್ಕೆ ಕುಳಿತಿದ್ದ ನಮಗೆಲ್ಲಾ ನಗುವೋ ನಗು. ಪಾಪದ ಮಕ್ಕಳಿಗೆ ನಾವೇಕೆ ನಗುತ್ತಿದ್ದೇವೆಂದೂ ತಿಳಿಯಲಿಲ್ಲ.

    ReplyDelete
  4. ಆ ಸಂಸ್ಕೃತ ಮಾಸ್ತರರಿಗೂ ತಿಳಿದಿರಲಾರದು ನೀವು ಏಕೆ ನಗುತ್ತಿದ್ದಿರೆಂದು!
    ಅಂದಹಾಗೆ ಏನೂ ತಿಳಿಯದ ಮಕ್ಕಳಿಗೆ ಗುರುಗಳು ಹೇಳಿದ್ದೇ ವೇದವಾಕ್ಯವಾಗಿರುತ್ತದೆ. ಅವು ಅದನ್ನೇ ಸರಿ ಎಂದು ನಂಬಿರುತ್ತಾರೆ.
    ನಾನು ನಮ್ಮ ಆ ಮಾಸ್ತರರೊಂದಿಗೆ ಅವರ ತಪ್ಪಿನ ಬಗ್ಗೆ ವಾದ ಮಾಡುತ್ತಿದ್ದರೆ ಸಹಪಾಠಿಗಳೆಲ್ಲ ನನ್ನೇ ದುರುದುರು ನೋಡುತ್ತಿರುತ್ತಿದ್ದರು!

    ReplyDelete
  5. ಇಂಥ ಅನಾಹುತಗಳಾಗುತ್ತವೆ ಎಂಬ ಕಾರಣಕ್ಕಾಗಿಯೇ ಜಾತಿಗೆ ಮೀಸಲಾತಿ ಬೇಡ, ಪ್ರತಿಭೆಗೆ ಮೀಸಲಾತಿ ಇರಲಿ ಎಂಬ ಆಂದೋಲನ ದೇಶದಲ್ಲಿ ನಡೆಯುತ್ತಿರೋದು....

    ಆದರೆ ರಾಜಕಾರಣಿಗಳು ಕೇಳ್ಬೇಕಲ್ಲಾ... ಇಂಥವರೇ ಮೇಷ್ಟ್ರು ಆಗಬೇಕು, ಹಾಗಿದ್ದರೆ ಮಾತ್ರ ಭಾವಿ ಪ್ರಜೆಗಳನ್ನು ಮೂರ್ಖರನ್ನಾಗಿಸಿ ಸಾಕಷ್ಟು ಮೇಯಬಹುದು ಎಂಬ ದು(ದೂ)ರಾಲೋಚನೆ ಉಳ್ಳವರು ಅವರು. ಅದುವೇ ರಾಜಕೀಯ ಅಲ್ವಾ...

    ಇದು ವಿಷಾದ ಯೋಗಕ್ಕೆ ಸೂಕ್ತವಾದ ವಿಷಯ !

    ReplyDelete
  6. "ಅಸಿವು" ಆದಾಗ "ಹನ್ನ" ತಿನ್ನುವ "ಹದ್ಯಾಪಕ" ಇರುವವರೆಗೆ ವಿದ್ಯಾರ್ಥಿಗಳಿಗೆ ದೇವರೇ ಗತಿ. ಇತ್ತೀಚೆಗೆ ಅದೇ ಭಾಷೆ "ಸಾಹಿತ್ಯ"ದ ಒಂದು ಪ್ರಕಾರ ಎಂದು ಪರಿಗಣಿಸಲ್ಪಟ್ಟಿದ್ದೂ ವಿಷಾದ-ಯೋಗವೇ ಸರಿ.

    ReplyDelete